ಬೆಂಗಳೂರಿನ ಮಲ್ಲೇಶ್ವರ ಬಿಜೆಪಿ ಕಚೇರಿ ಮುಂಭಾಗದಲ್ಲಿ ಬಾಂಬ್ ಸ್ಪೋಟ…
.
ಬೆಂಗಳೂರು, ಏ. 17 : ನಗರದ ಮಲ್ಲೇಶ್ವರ ಬಿಜೆಪಿ ಕಚೇರಿ ಮುಂಭಾಗ ಭಾರೀ ಸ್ಪೋಟ ಸಂಭವಿಸಿದೆ. ಮೂರು ಕಾರುಗಳು ಹೊತ್ತಿ ಉರಿಯುತ್ತಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬುಧವಾರ ಬೆಳಗ್ಗೆ 10.45 ರ ಸುಮಾರಿಗೆ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಈ ಸ್ಪೋಟ ಸಂಭವಿಸಿದೆ. ಮೂರು ಕಾರುಗಳು ಮತ್ತು 2 ಬೈಕ್ ಗಳು ಹೊತ್ತಿ ಉರಿಯತ್ತಿದ್ದು, ಸ್ಥಳದಲ್ಲಿದ್ದ ಜನರು ಬೆಂಕಿ ಆರಿಸಲು ಪ್ರಯತ್ನಿಸುತ್ತಿದ್ದಾರೆ. ಅಗ್ನಿ ಶಾಮಕ ದಳಗಳು ಸ್ಥಳಕ್ಕೆ ಆಗಮಿಸಿವೆ. ಮಲ್ಲೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೂರು ಮಂದಿ ಸ್ಪೋಟದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಪೋಟಗೊಂಡಿರುವುದು ಏನು ? ಎಂದು ಮಾಹಿತಿ ನಿರೀಕ್ಷಿಸಲಾಗುತ್ತದೆ. ತಮಿಳುನಾಡು ರಿಜಿಸ್ಟ್ರೀಶನ್ ಬೈಕ್ ನಲ್ಲಿ ಬಾಂಬ್ ಇರಿಸಲಾಗಿತ್ತು ಎನ್ನಲಾಗಿದೆ. ಚುನಾವಣಾ ಸಮಯವಾದ್ದರಿಂದ ಹೆಚ್ಚಿನ ಕಾರ್ಯಕರ್ತರು ಕಚೇರಿ ಬಳಿ ಜಮಾಯಿಸಿದ್ದರು. ಇಬ್ಬರು ಪೊಲೀಸರು, ಒಬ್ಬ ಮಹಿಳಾ ಪೇದೆ ಗಾಯಗೊಂಡಿರುವ
ಬಗ್ಗೆ ಪ್ರಾಥಮಿಕ ಮಾಹಿತಿಗಳು ತಿಳಿದು ಬಂದಿದೆ. ಪೊಲೀಸ್ ವ್ಯಾನ್ ಸಹ ಬೆಂಕಿಗೆ ಆಹುತಿಯಾಗಿದೆ. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಶ್ವಾನದಳದ ಸಿಬ್ಬಂದಿಯೂ ಆಗಮಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಪೋಟದ ತೀವ್ರತೆಗೆ ಅಕ್ಕ ಪಕ್ಕದ ಮನೆಗಳ ಕಿಟಕಿ ಗಾಜುಗಳು ಪುಡಿ-ಪುಡಿಯಾಗಿವೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ಗಾಯಗೊಂಡವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟದ ಸದ್ದು ಸುಮಾರು 3 ಕಿ.ಮೀ.ಗಳರೆಗೂ ಕೇಳಿಬಂದಿದೆ. ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಲ್ಲೇಶ್ವರ ಶಾಸಕ ಡಾ.ಅಶ್ವಥ್ ನಾರಾಯಣ್ ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಗೊಂಡವರಲ್ಲಿ 5 ಮಂದಿನ ಕೆಎಸ್ಆರ್ ಪಿ ಸಿಬ್ಬಂದಿ ಸೇರಿದ್ದಾರೆ. ಗಾಯಗೊಂಡವರಲ್ಲಿ ಮೂವರ ಗುರುತು ಪತ್ತೆಯಾಗಿದೆ. ನಿಶಾ (18), ರಕ್ಷಿತಾ (20), ಬಾಲಕೃಷ್ಣ ಅವರಿಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ.

Please follow and like us:
Leave a reply